ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಭತ್ತದ ಇಳುವರಿ ಕುಸಿತದಿಂದಾಗಿ ಸತತ ನಾಲ್ಕನೇ ಬಾರಿಗೆ ಅಕ್ಕಿ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಇದರ ಜೊತೆಗೆ ತೊಗರಿ ಬೇಳೆ ದರವೂ ಕೆಜಿಗೆ 150 ರೂ.ಗೆ ತಲುಪಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರ ಬಜೆಟ್ ಅಸ್ತವ್ಯಸ್ತಗೊಂಡಿದೆ.