ಶುಕ್ರವಾರ ಬಂತೆಂದರೆ ಚಿತ್ರಮಂದಿರಗಳಲ್ಲಿ ಹಬ್ಬ. ಹೊಸ-ಹೊಸ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತವೆ. ಅಂತೆಯೇ ಈ ವಾರ ಹಲವಾರು ಹೊಸ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ. ಅದರಲ್ಲೂ ಕನ್ನಡದ ಹಲವು ಹೊಸ ಸಿನಿಮಾಗಳು ಬರುತ್ತಿವೆ. ತೆಲುಗು ಮತ್ತು ತಮಿಳಿನಲ್ಲೂ ಸಹ ಕೆಲ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳು ಬಿಡುಗಡೆ ಆಗಿವೆ.