ಬೆಂಗಳೂರಿನ ಮಾರತಹಳ್ಳಿಯಲ್ಲಿದ್ದ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಅಕ್ಟೋಬರ್ 5 ರಿಂದ ವೈಟ್‌ಫೀಲ್ಡ್‌ನ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಹಳೆಯ ವಿಳಾಸದಲ್ಲಿ ಅಪಾಯಿಂಟ್‌ಮೆಂಟ್ ಪಡೆದವರು ಮರು-ಬುಕಿಂಗ್ ಮಾಡುವ ಅಗತ್ಯವಿಲ್ಲದೆ, ಅದೇ ದಿನಾಂಕ ಮತ್ತು ಸಮಯಕ್ಕೆ ಹೊಸ ಕೇಂದ್ರಕ್ಕೆ ಹಾಜರಾಗಬೇಕು.