ವಿಮಾನ ಇಂಧನವಾದ ಏವಿಯೇಷನ್ ಟರ್ಬೈನ್ ಫುಯೆಲ್ ದರವನ್ನು ಇಂದು 1.36 ರೂಗಳಷ್ಟು ಏರಿಸಲಾಗಿದೆ. 19 ಕಿಲೋ ಕಮರ್ಷಿಯಲ್ ಎಲ್​ಪಜಿ ದರವನ್ನು 10 ರೂ ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ನವೆಂಬರ್ 1ರಂದು ದರ ಪರಿಷ್ಕರಣೆ ಮಾಡಿವೆ. 19 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 2,898 ರೂಗೆ ಏರಿದೆ.