ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಕೊಡಗು ಜಿಲ್ಲೆಯ ಭಾಗಮಂಡಲಕ್ಕೆ ಅ.1ರಿಂದ ಕೆಎಸ್ಸಾರ್ಟಿಸಿ ರಾಜಹಂಸ ಬಸ್‌ ಕಾರ್ಯಾಚರಣೆ ಆರಂಭಿಸುತ್ತಿದೆ. ಬೆಂಗಳೂರಿನ ಶಾಂತಿನಗರ ಬಸ್‌ ನಿಲ್ದಾಣದಿಂದ ಅ.1ರಿಂದ ರಾತ್ರಿ 10.30ಕ್ಕೆ ಹೊರಡಲಿರುವ ಬಸ್‌ ಮರುದಿನ ಬೆಳಗ್ಗೆ 6.15ಕ್ಕೆ ಭಾಗಮಂಡಲ ತಲುಪಲಿದೆ.