ಕೋಲಾರ/ಮದನಪಲ್ಲಿ: ಆಂಧ್ರ ಪ್ರದೇಶ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕರ್ನಾಟಕ ಸಮೀಪದ ಮದನಪಲ್ಲಿಯಲ್ಲಿ 01 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ‘ಬೃಹತ್ ರಾಯಲಸೀಮೆ ತೋಟಗಾರಿಕಾ ಕೇಂದ್ರ' ಸ್ಥಾಪನೆಗೆ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಇದರಿಂದ ಕರ್ನಾಟಕ, ಆಂಧ್ರ ಗಡಿ ಜಿಲ್ಲೆಗಳ ರೈತರು, ತೋಟಗಾರಿಕಾ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ.