ಕಳೆದ 3 ವರ್ಷಗಳಲ್ಲಿ ರಾಜ್ಯದ 69 ಶಾಸಕರು ಮತ್ತು ಅವರ ಕುಟುಂಬದವರು 7.40 ಕೋಟಿ ರೂ. ವೈದ್ಯಕೀಯ ವೆಚ್ಚವನ್ನು ಮರುಪಾವತಿ ಪಡೆದಿರುವುದು ಆರ್‌ಟಿಐ ಮೂಲಕ ಬಹಿರಂಗವಾಗಿದೆ. ಬೇಲೂರು ಶಾಸಕ ಎಚ್.ಕೆ.ಸುರೇಶ್ ಅತಿ ಹೆಚ್ಚು ಮೊತ್ತ ಪಡೆದಿದ್ದರೆ, ನಿಖಿಲ್ ಉಮೇಶ್ ಕತ್ತಿ ಅತ್ಯಂತ ಕಡಿಮೆ ಪಡೆದಿದ್ದಾರೆ.