ಮುಂಬೈ: 500 ಕೋಟಿ ರೂ. ವಿಚಾರಕ್ಕೆ ಮಿತ್ರಪಕ್ಷಗಳಾದ ಶಿವಸೇನೆ (Shiv Sena) ಮತ್ತು ಬಿಜೆಪಿ (BJP) ನಡುವೆ ಸಮರ ಏರ್ಪಟ್ಟಿದೆ. ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಂಗೆ ಪಾಟೀಲ್ ಅವರು ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್ ಒಂದರಲ್ಲಿ, ಗುರುತು ತಿಳಿಯದ ಮಹಿಳೆಯೊಬ್ಬರು ಬಿಜೆಪಿ ಕಡೆಯಿಂದ 500 ಕೋಟಿ ರೂಪಾಯಿಗಳನ್ನು ಪಡೆಯುವ ಬಗ್ಗೆ ಮಾತನಾಡಿದ್ದಾರೆ.