ಅವಿನಾಶ್ ಮತ್ತು ದಯಾಳ್ ಅವರನ್ನು ಸಂಘದಿಂದ ಉಚ್ಛಾಟನೆ ಮಾಡಲಾಗಿದೆ. ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪವನ್ನು ಸಹ ಅವಿನಾಶ್ ವಿರುದ್ಧ ಮಾಡಲಾಗಿದೆ. ಈ ಬಗ್ಗೆ ಟಿವಿ9 ಜೊತೆಗೆ ಅವಿನಾಶ್ ಮತ್ತು ದಯಾಳ್ ಪಧ್ಮನಾಭ್ ಅವರು ಮಾತನಾಡಿದ್ದು, ನಿರ್ಮಾಪಕರ ಸಂಘದ ರಾಮಮೂರ್ತಿ ಅವರು ಮಾಡಿದ್ದಾರೆ ಎನ್ನಲಾದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.