ಶಿವಮೊಗ್ಗ: ನಗರದಲ್ಲಿ (Shivamogga) ದಸರಾ (Dasara) ಹಬ್ಬದ ಸಂಭ್ರಮ ಕಳೆಗಟ್ಟಿದೆ. ಜಂಬೂ ಸವಾರಿಗಾಗಿ ಆನೆಗಳ (Elephant) ತಂಡಕ್ಕೆ ಅಂಬಾರಿ ಹೊರುವ ಹಾಗೂ ಕುಮ್ಕಿ ಆನೆಗಳಿಗೆ ತರಬೇತಿ ಆರಂಭಿಸಲಾಗಿದೆ. ಆನೆ ಬಿಡಾರದ ವೈದ್ಯ ಡಾ. ಮುರಳಿ ಮನೋಹರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳಿಗೆ ಪ್ರತಿನಿತ್ಯ ಎರಡು ಬಾರಿ ತರಬೇತಿ ನೀಡುತ್ತಿದ್ದಾರೆ.