ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ (Pradosh) ಮಾಫಿ ಸಾಕ್ಷಿ ಹೇಳಿಕೆ ಬೆನ್ನಲ್ಲೇ ಪಿಎಸ್‌ಐ ವಿನಯ್‌ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ತನಿಖೆಯಲ್ಲಿ ಹಲವು ಸಾಕ್ಷಿಗಳನ್ನ ಸೃಷ್ಟಿಸಲಾಗಿದೆ. ಆರೋಪಿ ಸ್ಥಾನದಿಂದ ಪಿಎಸ್‌ಐ ವಿನಯ್‌ ಅವರನ್ನು ತಪ್ಪಿಸಲಾಗಿದೆ. ಪ್ರಕರಣದಲ್ಲಿ ವಿನಯ್ ಕೂಡ ಭಾಗಿ ಆಗಿದ್ದಾರೆ ಎಂದು ಆರೋಪಿಸಲಾಗಿದೆ.