ಕನ್ನಡ ಚಿತ್ರರಂಗದ ಮೇರುನಟ ದಿವಂಗತ ವಿಷ್ಣುವರ್ಧನ್ ಮತ್ತು ನಟಿ ದಿವಂಗತ ಬಿ ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಕಳೆದ ವರ್ಷವೇ ಘೋಷಣೆ ಮಾಡಿದೆ. ಅಗಲಿರುವ ಈ ಇಬ್ಬರು ಮಹನೀಯರಿಗೆ ಗೌರವ ಪೂರ್ವಕವಾಗಿ ಪ್ರಶಸ್ತಿ ಪ್ರದಾನ ಮಾಡಲು ದಿನಾಂಕವನ್ನು ಸರ್ಕಾರ ನಿಗದಿಪಡಿಸಿದೆ. ಸಚಿವ ಶಿವರಾಜ್ ತಂಗಡಗಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.