ವಿಶ್ವದ ನಂಬರ್ ಒನ್ ಉದ್ಯಮಿ ಇಲಾನ್ ಮಸ್ಕ್ ಅವರು ಅಮೆರಿಕದ ಎಲ್ಲಾ ಮಕ್ಕಳಿಗೂ ಸ್ಪೇಸ್ ಎಕ್ಸ್ ಷೇರನ್ನು ಕೊಡುಗೆಯಾಗಿ ನೀಡಲಿದ್ದಾರಂತೆ. ಹಾಗಂತ ಖುದ್ದು ಅವರೇ ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ಹೇಳಿದ್ದಾರೆ. ಇಂಥ ಹಲವು ಕೊಡುಗೆಗಳಲ್ಲಿ ಇದು ಮೊದಲನೆಯದು ಎಂದೂ ಹೇಳಿದ್ದಾರೆ. ಅಮೆರಿಕದಲ್ಲಿ 18 ವರ್ಷದೊಳಗಿನ ವಯೋಮಾನದಲ್ಲಿ 7 ಕೋಟಿಯಷ್ಟು ಮಕ್ಕಳಿದ್ದಾರೆ.