ಮುಂಬೈ ರಣಜಿ ಟ್ರೋಫಿ ತಂಡವನ್ನು ಪ್ರಕಟಿಸಲಾಗಿದ್ದು, ಲಭ್ಯವಿದ್ದರೂ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ಕಡೆಗಣಿಸಲಾಗಿದೆ. ಸಿದ್ದೇಶ್ ಲಾಡ್ ನಾಯಕರಾಗಿದ್ದು, 19 ವರ್ಷದ ಆಯುಷ್ ಮ್ಹಾತ್ರೆಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ಗಾಯಗೊಂಡಿರುವ ಶಾರ್ದೂಲ್ ಠಾಕೂರ್ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.