ರಾಮಾಯಣ ಸಿನಿಮಾದ ಪ್ರಚಾರದ ವೇಳೆ ನಟ ಯಶ್ ಅವರು 2011ರ 'ಕಿರಾತಕ' ಸಿನಿಮಾದ ಸೀಕ್ವೆಲ್ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಆರಂಭವಾಗಿ ಅರ್ಧಕ್ಕೆ ನಿಂತಿದ್ದ 'ಮೈ ನೇಮ್ ಇಸ್ ಕಿರಾತಕ' ಚಿತ್ರ ಮತ್ತೆ ಸೆಟ್ಟೇರುವ ಸಾಧ್ಯತೆಯ ಬಗ್ಗೆ ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.