ಐಐಟಿಗಳಿಂದ ಪದವಿ ಪಡೆದ ನೂರಾರು ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಉದ್ಯೋಗದ ಆಫರ್ ಲೆಟರ್‌ಗಳನ್ನು ಕಂಪನಿಗಳು ಹಿಂಪಡೆಯುತ್ತಿವೆ. ಕೃತಕ ಬುದ್ಧಿಮತ್ತೆ ಮತ್ತು ಆರ್ಥಿಕ ತೊಂದರೆಗಳಿಂದಾಗಿ ಈ ಬೆಳವಣಿಗೆ ನಡೆದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಐಟಿ ಉದ್ಯೋಗ ನಿಯೋಜನೆ ಸಮಿತಿಯು 22 ಕಂಪನಿಗಳ ವಿರುದ್ಧ ಅಸಹಕಾರ ನೀತಿ ಘೋಷಿಸಿದೆ.