ರೈಲ್ವೆ ಕಾಮಗಾರಿ, ರಸ್ತೆ ನಿರ್ಮಾಣ ಕಾಮಗಾರಿ ಇತ್ಯಾದಿ ಮೂಲಸೌಕರ್ಯ ಕ್ಷೇತ್ರದಲ್ಲಿ ಬಳಕೆಯಾಗುವ ಟಿಬಿಎಂ, ಎಕ್ಸ್​ಕವೇಟರ್ ಇತ್ಯಾದಿ ಯಂತ್ರೋಪಕರಣಗಳನ್ನು ಭಾರತದಲ್ಲೇ ತಯಾರಿಸಲು ಸರ್ಕಾರ ಯೋಜನೆ ಹಾಕಿದೆ. ಈ ಸ್ಕೀಮ್​ಗೆ ಕೇಂದ್ರ ಸಂಪುಟದ ಅನುಮೋದನೆಯೂ ಸಿಕ್ಕಿದೆ.