ಏಷ್ಯನ್ ಗೇಮ್ಸ್​​ ಟಿ20 ಟೂರ್ನಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಹಾಂಗ್ ಕಾಂಗ್, ಅಫ್ಘಾನಿಸ್ತಾನ್, ನೇಪಾಳ ಮತ್ತು ಮಲೇಷ್ಯಾ ತಂಡಗಳು ಟೂರ್ನಿಯಿಂದ ಹೊರಬಿದ್ದರೆ, ಭಾರತ, ಶ್ರೀಲಂಕಾ, ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿವೆ. ಅದರಂತೆ ಈ ನಾಲ್ಕು ತಂಡಗಳ ನಡುವೆ ಪದಕಕ್ಕಾಗಿ ಪೈಪೋಟಿ ನಡೆಯಲಿದೆ.