ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಮತ್ತು ನಿರ್ಮಾಪಕ ಸಂಜಯ್ ಗುಪ್ತಾ ಅವರು 57ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. 'ಶೂಟೌಟ್ ಅಟ್ ಲೋಖಂಡ್ವಾಲಾ', 'ಕಾಬಿಲ್' ಮತ್ತು 'ಕಾಂಟೇ' ನಂತಹ ಸೂಪರ್ ಹಿಟ್ ಆ್ಯಕ್ಷನ್ ಹಾಗೂ ಕ್ರೈಮ್ ಥ್ರಿಲ್ಲರ್ ಸಿನಿಮಾಗಳನ್ನು ನೀಡಿ ಸೌಂಡ್ ಸೃಷ್ಟಿಸಿದ್ದ ಈ ಹಿರಿಯ ನಿರ್ದೇಶಕರ ಅಕಾಲಿಕ ಅಗಲಿಕೆಗೆ ಹಿಂದಿ ಚಿತ್ರರಂಗ ಕಂಬನಿ ಮಿಡಿದಿದೆ.