ಮಂಗಳೂರಿನ ಕೊಟ್ಟಾರದಲ್ಲಿರುವ 2.75 ಎಕರೆ ವಿಸ್ತೀರ್ಣದ ಮಾಜಿ ಇನ್ಫೋಸಿಸ್ ಕ್ಯಾಂಪಸ್ ಅನ್ನು 'ಮುಕುಂದ್ ಎಂಜಿಎಂ ರಿಯಾಲ್ಟಿ' ಸಂಸ್ಥೆ ಖರೀದಿಸಿದೆ. ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಸಲು ಈ ಜಾಗದಲ್ಲಿ ಜಾಗತಿಕ ಮಟ್ಟದ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಸಂಸ್ಥೆಯ ಉದ್ದೇಶವಾಗಿದೆ.