ಭೂಮಿಯಿಂದ 225 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಮಂಗಳ ಗ್ರಹದಲ್ಲಿ ನಾಸಾದ ರೋವರ್‌ ಹೊಸ ದಾಖಲೆ ನಿರ್ಮಿಸಿದೆ. ಮನುಷ್ಯರಿಲ್ಲದ ಗ್ರಹದಲ್ಲಿ ಸ್ವಯಂಚಾಲಿತವಾಗಿ ಸಂಚರಿಸುತ್ತಿರುವ ಈ ರೋವರ್‌ ಈಗಾಗಲೇ 45.22 ಕಿಲೋಮೀಟರ್‌ ಪ್ರಯಾಣಿಸಿದೆ. ಅಷ್ಟೇ ಅಲ್ಲ, ಮಂಗಳ ಗ್ರಹದಲ್ಲಿ ಹಿಂದೆ ಜೀವವಿತ್ತೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಮಹತ್ವದ ಕಾರ್ಯವನ್ನೂ ಮಾಡುತ್ತಿದೆ.