ಭುವನೇಶ್ವರ: ಆಸ್ಪತ್ರೆಯ ಆವರಣದಲ್ಲೇ ಆಂಬ್ಯುಲೆನ್ಸ್‌ನಲ್ಲಿದ್ದ ಆಕ್ಸಿಜನ್ (Ambulance Blast) ಸಿಲಿಂಡರ್ ಸ್ಫೋಟಗೊಂಡು ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಯೂರ್ಭಂಜ್ ಜಿಲ್ಲೆಯ ಉಡಾಲಾ ಉಪವಿಭಾಗೀಯ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.