ಗಾಂಧಿನಗರ: ಊಟದ ವಿಚಾರಕ್ಕೆ ದಂಪತಿ ನಡುವೆ ಉಂಟಾದ ಕೌಟುಂಬಿಕ ಕಲಹದಲ್ಲಿ, ಮಾಜಿ ಸೈನಿಕನನ್ನೇ (Ex Army) ಪತ್ನಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗುಜರಾತ್‌ನ (Gujarat) ಅಹಮದಾಬಾದ್‌ನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಮಾಜಿ ಸೈನಿಕ ದಿಲೀಪ್ ಖರಾಡೆ. ಊಟಕ್ಕೆ ಯಾವ ತರಕಾರಿ ಪಲ್ಯ ಮಾಡಿದ್ದೀಯಾ ಎಂದು ಕೇಳಿದ್ದಕ್ಕೆ ಈ ಕೊಲೆ ನಡೆದಿದೆ.