ಚೀನಾ ಮಾಡುವ ಪ್ರತಿಯೊಂದು ನಿರ್ಧಾರವೂ ಒಂದಿಲ್ಲೊಂದು ಕಾರಣಕ್ಕೆ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡುತ್ತದೆ. ಕೊರೊನಾ ಸಮಯದಲ್ಲಿ ಹಾಗೂ ಅದರ ಪೂರ್ವದಲ್ಲಿ ಚೀನಾ ತೆಗೆದುಕೊಂಡ ನಿರ್ಧಾರಗಳು ಭಾರೀ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಚೀನಾ ಚಿನ್ನದ ವಿಷಯದಲ್ಲಿ ಇದೇ ರೀತಿಯ ಕೆಲಸವೊಂದನ್ನು ಮಾಡುತ್ತಿದೆ. ಮನಸೋಇಚ್ಛೆ ಚಿನ್ನ ಖರೀದಿ ಮಾಡಿಕೊಳ್ಳುತ್ತಿದೆ.