ಅಮರಾವತಿ: ಆಂಧ್ರಪ್ರದೇಶದ ಕರಾವಳಿಗೆ ಅರ್ನಬ್‌ ಚಂಡಮಾರುತ ಅಪ್ಪಳಿಸಲಿದೆ. ನಸುಕಿನ 2 ರಿಂದ ಮುಂಜಾನೆ 4 ಗಂಟೆಯೊಳಗೆ ಭೂಕುಸಿತ ಆಗುವ ಸಾಧ್ಯತೆ ಇದೆ. ಗಂಟೆಗೆ 135 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಗಾಳಿಯ ವೇಗ ಗಂಟೆಗೆ 150 ಕಿ.ಮೀ. ವರೆಗೂ ಹೆಚ್ಚಳವಾಗುವ ಸಾಧ್ಯತೆಯಿದೆ. ಆಂಧ್ರ ಕರಾವಳಿಯಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ.