ಮಕ್ಕಳಿಗೆ ಶಾಲೆಯ ದಿನಗಳಲ್ಲಿ ಗೆಳೆಯರ ಜೊತೆಗೂಡಿ ಗರಿಗರಿಯಾದ ಸಮೋಸಾ, ಬಿಸಿಬಿಸಿ ವಡಾಪಾವ್ ಹಾಗೂ ಚಾಕೊಲೇಟ್‌ಗಳನ್ನ ತಿನ್ನುವುದೆಂದರೆ ಎಲ್ಲಿಲ್ಲದ ಪ್ರೀತಿ. ಆದರೆ ಈ ಜಂಕ್ ಫುಡ್‌ಗಳು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂಬ ಕಾರಣಕ್ಕೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಶಾಲೆಗಳಲ್ಲಿ ಇವುಗಳ ಮಾರಾಟಕ್ಕೆ ಬ್ರೇಕ್ ಹಾಕಿತ್ತು.