‘ಬಿಗ್ ಬಾಸ್ ಕನ್ನಡ 13’ ಆಟದಲ್ಲಿ ಈಗ 80 ದಿನಗಳು ಕಳೆದಿವೆ. ಫಿನಾಲೆ ಸಮೀಪ ಆಗುತ್ತಿದೆ. ಈ ಹಂತದಲ್ಲಿ ಹಲವು ಟ್ವಿಸ್ಟ್ ನೀಡಲಾಗುತ್ತಿದೆ. ಮನೆಯಲ್ಲಿ ಇರುವ ಗುಳ್ಳೆನರಿ ಯಾರು ಎಂಬುದನ್ನು ಪತ್ತೆಹಚ್ಚಬೇಕಿದೆ. ಗಗನ್ ಚಿನ್ನಪ್ಪ ಅವರು ಗಾನವಿ ಮೇಲೆ ಹೆಚ್ಚು ಅನುಮಾನ ವ್ಯಕ್ತಪಡಿಸಿದ್ದಾರೆ.