ರಾಜ್ಯದಲ್ಲಿ ವರುಣನ ಅಬ್ಬರ ಇರಬೇಕಾದ ಜುಲೈ ತಿಂಗಳಿನಲ್ಲಿ ಬಿಸಿಲಿನ ಝಳ ಜನರನ್ನು ಕಂಗಾಲಾಗುವಂತೆ ಮಾಡಿದೆ. ಈ ನಡುವೆ, ಹವಾಮಾನ ಇಲಾಖೆಯ ವಿಜ್ಞಾನಿ ಸಿ.ಎಸ್. ಪಾಟೀಲ ಪ್ರಜಾವಾಣಿ ಡಿಜಿಟಲ್ ಜೊತೆ ಮಾತಾನಾಡಿ, ಇನ್ನೊಂದು ವಾರ ರಾಜ್ಯದಲ್ಲಿ ಮಳೆಯಾಗುವ ಸಂಭವ ಇಲ್ಲ ಎಂದಿದ್ದಾರೆ.