ರಾತ್ರಿಯ ಸಮಯದಲ್ಲಿ ಬಾಹ್ಯಾಕಾಶದಿಂದ ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸುವ ವಿನೂತನ ಯೋಜನೆಗಾಗಿ ಅಮೆರಿಕದ 'ರಿಫ್ಲೆಕ್ಟ್ ಆರ್ಬಿಟಲ್' ಸ್ಟಾರ್ಟ್‌ಅಪ್ ಭಾರತದ 'ಸ್ಕೈರೂಟ್ ಏರೋಸ್ಪೇಸ್' ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕೆಳ ಭೂ ಕ್ಷಕ್ಷೆಯಲ್ಲಿ ಎರಡು ಬೃಹತ್ ಕನ್ನಡಿಗಳನ್ನು ಇರಿಸಿ, ಆ ಮೂಲಕ ಸೂರ್ಯನ ಬೆಳಕನ್ನು ಭೂಮಿಗೆ ಹರಿಸುವ ಕಲ್ಪನೆ ಇದು.