ದೊಡ್ಡಬಳ್ಳಾಪುರ: ಪೋಷಕರ ಆರೈಕೆಯಿಂದ ವಂಚಿತ ಮಕ್ಕಳಿಗೆ ಸುರಕ್ಷಿತ ಕುಟುಂಬ ವಾತಾವರಣ ಕಲ್ಪಿಸುವುದು ಹಾಗೂ ಅವರಿಗೆ ಕುಟುಂಬದ ಪ್ರೀತಿ, ಆರೈಕೆ ದೊರೆಯುವಂತೆ ಮಾಡುವ ಉದ್ದೇಶದಿಂದ ರೂಪಿಸಿರುವ ಪೋಷಕತ್ವ ಯೋಜನೆಯ ಅನುಷ್ಠಾನದ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.