ತಾಯಿ ಅನಾರೋಗ್ಯದಿಂದ ಗುಣಮುಖಳಾದರೆ 12 ಜ್ಯೋತಿರ್ಲಿಂಗಗಳಿಗೆ ಓಡುತ್ತಾ ತೆರಳಿ ದರ್ಶನ ಪಡೆಯುವುದಾಗಿ ಸಂಕಲ್ಪ ಮಾಡಿದ್ದ ಬಿಹಾರದ 19 ವರ್ಷದ ಮೋನು ಮೆಟುರ್ಬಾಲಾ, ತಮ್ಮ ಯಾತ್ರೆ ಆರಂಭಿಸಿದ್ದಾರೆ. ಪ್ರತಿದಿನ ಸುಮಾರು 50 ಕಿ.ಮೀ. ಓಡುತ್ತಿರುವ ಅವರು, ಇದುವರೆಗೆ ಸುಮಾರು 8,000 ಕಿ.ಮೀ. ಕ್ರಮಿಸಿ ಐದು ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.