ತುಮಕೂರು: ಕೆಪಿಎಸ್‌ಸಿ ಹಗರಣದ (KPSC Scam) ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆಗೆ (Basavaraj Kannale) ಮತ್ತೊಂದು ಶಾಕ್ ಎದುರಾಗಿದೆ. ತುಮಕೂರು ವಿಶ್ವವಿದ್ಯಾಲಯದ (Tumakuru University) ಸಿಂಡಿಕೇಟ್ ಸದಸ್ಯ ಸ್ಥಾನದಿಂದ ಕನ್ನಾಳೆಯನ್ನು ವಜಾಗೊಳಿಸಲಾಗಿದೆ. ರಾಜ್ಯಪಾಲರ ನಿರ್ದೇಶನದಂತೆ ಸಿಂಡಿಕೇಟ್ ಸದಸ್ಯತ್ವದಿಂದ ಕಿಕ್ ಔಟ್ ಮಾಡಲಾಗಿದೆ.