ತೆಲುಗು ಚಿತ್ರರಂಗ, ನಟರ ಕುರಿತು ಬಾಲಿವುಡ್ ನಟಿ ರಾಧಿಕಾ ಆಪ್ಟೆ ಇತ್ತೀಚಗೆ ನೀಡಿರುವ ಅಸಂಬದ್ಧ ಹೇಳಿಕೆಗಳು ಭಾರೀ ಸಂಚಲನ ಮೂಡಿಸಿವೆ. ಪುರುಷ ಪ್ರಧಾನವಾಗಿರುವ ಟಾಲಿವುಡ್ ಹೀರೋಗಳನ್ನು ಮುದುಕರೆಂದು ಹೇಳಿದ್ದಲ್ಲದೇ, ಅಲ್ಲಿರುವ ಕೆಲವು ಪದ್ಧತಿಗಳನ್ನು ಪರೋಕ್ಷವಾಗಿ ಟೀಕಿಸಿದ ರಾಧಿಕಾ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ.