ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಮಲಸಹೋದರಿ ಅಮರ್‌ಜೋತ್ ಕೌರ್ ಕೂಡ ಕ್ರೀಡೆಯಲ್ಲಿ ಸಕ್ರಿಯರಾಗಿದ್ದಾರೆ. ಟೆನಿಸ್‌ನಿಂದ ಪ್ಯಾಡಲ್ ಕ್ರೀಡೆಗೆ ಬದಲಾದ ಇವರು, ಏಷ್ಯಾ ಪೆಸಿಫಿಕ್ ಪ್ಯಾಡೆಲ್ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.