ಮಂಡ್ಯ: ರೈತರ ಜಮೀನು ವ್ಯಾಜ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಸೂಚಿಸಿದರು. ತಾಲ್ಲೂಕಿನ ಕೊತ್ತತ್ತಿ-1ನೇ ಹೋಬಳಿಯ ಕೊತ್ತತ್ತಿ ಗ್ರಾಮದಲ್ಲಿ ಶನಿವಾರ ನಡೆದ ಪ್ರಜಾ ಸೇವೆ ಆಂದೋಲನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಭಾಗದಲ್ಲಿ 1960ಕ್ಕೂ ಹಿಂದಿನಿಂದಲೂ ಕೆಲವು ಕುಟುಂಬ ಗಳು ಜಮೀನ...