ಬಾಗಲಕೋಟೆ: ನಗರದಲ್ಲಿ ಬೀದಿ ನಾಯಿಗಳ(Street Dog) ಉಪಟಳ ಮಿತಿಮೀರಿದ್ದು, ಕರ್ತವ್ಯ ನಿರತ ಹೆಸ್ಕಾಂ ಮೀಟರ್ ರೀಡರ್(Meter Reader) ಒಬ್ಬರ ಮೇಲೆ ಬೀದಿ ಶ್ವಾನವೊಂದು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ. ನಾಗಣ್ಣ ಕೋಗಿಲ್ ಗಾಯಗೊಂಡ ಮೀಟರ್ ರೀಡರ್. ಬಾಗಲಕೋಟೆಯ(Bagalkote) ವಿದ್ಯಾಗಿರಿ 6ನೇ ಕ್ರಾಸ್‌ನಲ್ಲಿ ಈ ಘಟನೆ ಸಂಭವಿಸಿದೆ.