ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಕಾರಿನ ಮೇಲೆ ಶೂಟೌಟ್ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಅಸಲಿ ಸತ್ಯವೊಂದು ಬಯಲಾಗಿದೆ. ಮುಂಬೈ (Mumbai) ಬಳಿ ಶೂಟಿಂಗ್ ಪ್ರ್ಯಾಕ್ಟೀಸ್‌ ಮಾಡುವಾಗ ಮಿಸ್ ಫೈರ್ ಆಗಿತ್ತು ಎನ್ನುವುದು ಹೊರಬಿದ್ದಿದೆ.