ಬ್ಲಾಕ್‌ಬಸ್ಟರ್ ‘ಚಂದ್ರ ಚಕೋರಿ’ ಸಿನಿಮಾ ಬಳಿಕ ದಿಢೀರನೆ ಮಾಯವಾಗಿದ್ದ ನಟಿ ಪ್ರಿಯಾ ಛಬ್ರಿಯಾ ಕೊನೆಗೂ ತಾವೇಕೆ ಚಿತ್ರರಂಗದಿಂದ ದೂರ ಉಳಿದಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ತಂದೆಯ ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣಗಳಿಂದ ಸಿನಿಮಾಗಳಿಂದ ದೂರವಾಗಿದ್ದ ನಟಿ, ಇದೀಗ ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.