ಕೆನಡಾದ ವಿನ್ನಿಪೆಗ್‌ನಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಿಜಯಪುರ ಜಿಲ್ಲೆಯ ಸಚಿನ್ ಸಾಳುಂಕೆ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. 105 ಕೆಜಿ ವಿಭಾಗದಲ್ಲಿ ಸ್ಕ್ವಾಟ್‌ನಲ್ಲಿ 310 ಕೆಜಿ, ಬೆಂಚ್‌ಪ್ರೆಸ್‌ನಲ್ಲಿ 180 ಕೆಜಿ ಮತ್ತು ಡೆಡ್‌ಲಿಫ್ಟ್‌ನಲ್ಲಿ 270 ಕೆಜಿ ಭಾರ ಎತ್ತಿ ಇಂಗ್ಲೆಂಡ್ ಎದುರಾಳಿಯನ್ನು ಮಣಿಸಿದರು.