ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ 'ಕಾಂತಾರ' ಸಿನಿಮಾದ ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ನಡುವೆ ಶೀತಲ ಸಮರ ಶುರುವಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಪರಸ್ಪರ ಲೋಗೋ ಮತ್ತು ಫೋಟೋಗಳನ್ನು ಕೈಬಿಟ್ಟು ಪೋಸ್ಟ್ ಮಾಡುವ ಮೂಲಕ ಟಾಂಗ್ ನೀಡುತ್ತಿದ್ದಾರೆ.