ದೀಪಾವಳಿ ಹಬ್ಬದ ಸೀಸನ್‌ನಲ್ಲಿ ಯುಪಿಐ (UPI) ಡಿಜಿಟಲ್ ಪಾವತಿ ವ್ಯವಸ್ಥೆಯು ಸಾರ್ವಕಾಲಿಕ ದಾಖಲೆ ಬರೆದಿದೆ. ಭರ್ಜರಿ ವಹಿವಾಟಿನ ಮೂಲಕ ಹೊಸ ಮೈಲಿಗಲ್ಲು ತಲುಪಿದೆ ಎಂದು ವರದಿಗಳು ತಿಳಿಸಿವೆ. ಅಕ್ಟೋಬರ್ ತಿಂಗಳಲ್ಲಿ ಯುಪಿಐ ವಹಿವಾಟು 31.53 ಲಕ್ಷ ಕೋಟಿ ರೂ ಆಗಿದೆ. ಆ ತಿಂಗಳ ನಿತ್ಯದ ಸರಾಸರಿ ಯುಪಿಐ ವಹಿವಾಟು 1 ಲಕ್ಷ ಕೋಟಿ ರೂ ಆಗಿದೆ.