ಬೆಳಗಾವಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಅಲಕನೂರು ಗ್ರಾಮದ ಕರಿಸಿದ್ದೇಶ್ವರ ಮಠದಲ್ಲಿದ್ದ 32 ವರ್ಷದ 'ಧ್ರುವ' ಎಂಬ ಆನೆ ಮೃತಪಟ್ಟಿದೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡದೆ ಆರೈಕೆಯಲ್ಲಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಈ ಸಾವಿಗೆ ಕಾರಣ ಎಂದು ಆರೋಪಗಳು ಕೇಳಿ ಬಂದಿವೆ.