ನಟ ಡಾಲಿ ಧನಂಜಯ ಮತ್ತು ಡಾ. ಧನ್ಯತಾ ಅವರ ಮದುವೆಯ ಸುಂದರ ಕ್ಷಣಗಳನ್ನು ಒಗ್ಗೂಡಿಸಿ ಒಂದು ವಿಶೇಷ ಸಿನಿಮಾ ಮಾಡಲಾಗಿದೆ. ತಂತ್ರಜ್ಞರ ಶ್ರಮಕ್ಕೆ ಮನ್ನಣೆ ನೀಡುವ ಉದ್ದೇಶದಿಂದ ಈ ವೈಯಕ್ತಿಕ ಮದುವೆಯ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.