ಶಿವಮೊಗ್ಗದ ಜಂಬೂಸವಾರಿ ವೇಳೆ ಆನೆ 'ಸೋಮಣ್ಣ' ಬೆದರಿ ಓಡಿದ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಂದಿನ ವರ್ಷದಿಂದ ಉತ್ಸವಗಳಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಕನಿಷ್ಠ 20 ರಿಂದ 30 ದಿನಗಳ ಕಡ್ಡಾಯ ತಾಲೀಮು ನೀಡುವಂತೆ ಸಚಿವ ರಾಮಲಿಂಗಾರೆಡ್ಡಿ ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ.