ಸ್ಯಾಂಡಲ್‌ವುಡ್‌ನ ಪ್ರೀತಿಯ ಜೋಡಿ ಕಿಚ್ಚ ಸುದೀಪ್‌ ಹಾಗೂ ಪ್ರಿಯ ದಂಪತಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಕಳೆದ ಭಾನುವಾರ ಆಪ್ತರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನಡೆದ ಈ ವಿಶೇಷ ಸಮಾರಂಭದ ವಿಡಿಯೋ ಇದೀಗ ಬಿಡುಗಡೆಯಾಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.