ಐಡಿಬಿಐ ಬ್ಯಾಂಕ್‌ನ ಶೇ. 60.72ರಷ್ಟು ಷೇರುಗಳ ಮಾರಾಟ ಪ್ರಕ್ರಿಯೆ ಚುರುಕುಗೊಂಡಿದ್ದು, ಪರಿಷ್ಕೃತ ಬಿಡ್‌ಗಳ ಪರಿಶೀಲನೆ ನಡೆಯುತ್ತಿದೆ. ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಮತ್ತು ಎಮಿರೇಟ್ಸ್ ಎನ್‌ಬಿಡಿ ಸಂಸ್ಥೆಗಳು ಈ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಶೀಘ್ರದಲ್ಲೇ ಅಂತಿಮ ಬಿಡ್ಡರ್ ಹೆಸರನ್ನು ಕೇಂದ್ರ ಸರ್ಕಾರ ಪ್ರಕಟಿಸುವ ನಿರೀಕ್ಷೆಯಿದೆ.