ಬಾಂಗ್ಲಾದೇಶದ ಮೈಮೆನ್‌ಸಿಂಗ್ ಜಿಲ್ಲೆಯಲ್ಲಿ 50 ವರ್ಷದ ಹಿಂದೂ ಆಭರಣ ವ್ಯಾಪಾರಿಯೊಬ್ಬರ ಮೃತದೇಹವು ನೀರಿನಲ್ಲಿ ತೇಲುತ್ತಿದ್ದ ಡ್ರಮ್‌ ಒಂದರಲ್ಲಿ ಪತ್ತೆಯಾಗಿದೆ. ಅವರನ್ನು ಕೊಲೆ ಮಾಡಿ, ನಂತರ ಮೃತದೇಹವನ್ನು ಡ್ರಮ್‌ನಲ್ಲಿಟ್ಟು ವಿಲೇವಾರಿ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರನ್ನು ನಿರಂಜನ್ ಚಂದ್ರ ಸೂತ್ರಧಾರ್ ಎಂದು ಗುರುತಿಸಲಾಗಿದೆ.