ಚಿನ್ನದಲ್ಲಿ 24 ಕ್ಯಾರಟ್, 22 ಕ್ಯಾರಟ್, 18 ಕ್ಯಾರಟ್, 16 ಕ್ಯಾರಟ್, ಹೀಗೆ ವಿವಿಧ ಶುದ್ಧತೆಯ ಪ್ರಾಕಾರಗಳಿವೆ. ಕೆಲವೊಮ್ಮೆ 18 ಕ್ಯಾರಟ್ ಚಿನ್ನವನ್ನು 22 ಕ್ಯಾರಟ್ ಚಿನ್ನವೆಂದು ನಂಬಿಸಿ ಮಾರುವವರಿರುತ್ತಾರೆ. ಹೀಗಾಗಿ, ಸರ್ಕಾರವು ಎಲ್ಲಾ ಚಿನ್ನಕ್ಕೂ ಹಾಲ್ಮಾರ್ಕ್ ಗುರುತು ಕಡ್ಡಾಯಗೊಳಿಸಿದೆ.