ನಟಿ ಸ್ವರಾ ಭಾಸ್ಕರ್ ಅವರು ಮದುವೆಗೂ ಮುನ್ನವೇ ತಾಯಿಯಾಗಲು ಬಯಸಿದ್ದರು ಎಂಬ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅನಾಮಧೇಯ ದಾನಿಯ ಮೂಲಕ ಐವಿಎಫ್ ತಂತ್ರಜ್ಞಾನ ಬಳಸಿ ಎರಡು ಬಾರಿ ಗರ್ಭಧರಿಸಲು ಪ್ರಯತ್ನಿಸಿ ವಿಫಲರಾಗಿದ್ದಾಗಿ ಅವರು ಹೇಳಿಕೊಂಡಿದ್ದಾರೆ.