ಸಿನಿಮಾ ನೋಡಬೇಕು ಎಂದು ಖುಷಿ ಖುಷಿಯಿಂದ ಟಿಕೆಟ್ ಖರೀದಿಸುವ ಪ್ರೇಕ್ಷಕರಿಗೆ ಥಿಯೇಟರ್‌ಗಳಲ್ಲಿ ಕಿರಿಕಿರಿ ಉಂಟುಮಾಡುವ ಪ್ರಮುಖ ಅಂಶವೆಂದರೆ ಜಾಹೀರಾತುಗಳು. ಸಿನಿಮಾ ಶುರುವಾಗುವ ಸಮಯವಿದ್ದರೂ, ನಿರಂತರವಾಗಿ ಜಾಹೀರಾತುಗಳನ್ನ ಪ್ರಸಾರ ಮಾಡಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವ ಟ್ರೆಂಡ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಾಮಾನ್ಯವಾಗಿದೆ.